top of page
website header.png

June 16th - 22nd

ನಿರಂತರತೆ, ಉಸಿರಾಟ, ಧ್ಯಾನ ಮತ್ತು ಆಹಾರದ ಆಧಾರದ ಮೇಲೆ ಪರಿಕರಗಳು ಮತ್ತು ಕೌಶಲತೆಗಳನ್ನ ಅರ್ಥಮಾಡಿಕೊಳ್ಳಿ ಮತ್ತು ಅಭ್ಯಾಸ ಮಾಡಿ
ಕಾರ್ಯಕ್ರಮದ ಉದ್ದೇಶಗಳು:

 

೧) ದೈಹಿಕ ಆರೋಗ್ಯ ಸುಧಾರಣೆ :

ದೈಹಿಕ ಆರೋಗ್ಯ ಸುಧಾರಿಸುವುದು ಸಮೃದ್ಧಿ ಸಂಪದ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ನಾವಿಲ್ಲಿ ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಆರೋಗ್ಯಕರ ಆಹಾರ, ವಿಶ್ರಾಂತಿ, ನಿದ್ರೆಯಂತಹ ಶರೀರಕ್ಕೆ ನವಚೈತನ್ಯ ನೀಡಬಲ್ಲ ಚಟುವಟಿಕೆಗಳ ಮೇಲೆ ಕೇಂದ್ರಿಕರಿಸುತ್ತೇವೆ.

ವಿಷಯ :

ಶರೀರವು ಚೈತನ್ಯಶೀಲವಾಗಿರಲು ಮುಂಜಾನೆಯ ಯೋಗ ನಮ್ಮನ್ನು ನಿಸರ್ಗದೊಡನೆ ನೇರ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿದೆ. ಪ್ರಕೃತಿಯೊಂದಿಗಿನ ಒಡನಾಟ, ನಡಿಗೆ ನಮಗೆ ಉಲ್ಲಾಸದಿಂದಿರಲು ಪೂರಕವಾಗಿವೆ. ಪೌಷ್ಟಿಕಾಂಶಯುಕ್ತ, ರುಚಿಕರವಾದ ಆಹಾರ ನಮ್ಮ ದೇಹಕ್ಕೆ ನವೋತ್ಸಾಹ ನೀಡಲು ಹೇಗೆ ಪರಿಣಾಮಕಾರಿ ಎಂಬುವುದರ ಕುರಿತು ಕಾರ್ಯಾಗಾರ.
 

೨) ಮಾನಸಿಕ ಸ್ಥಿರತೆ ಮತ್ತು ಆರೋಗ್ಯ :

"ಆರೋಗ್ಯಕರ ಮನಸ್ಸು ಸಮೃದ್ಧ ಜೀವನದ ಕೈಗನ್ನಡಿ" ನಾವೆಲ್ಲ ಮಾನಸಿಕ ಸ್ಥಿರತೆ, ಒತ್ತಡ ನಿಯಂತ್ರಣ, ಆತಂಕ ನಿವಾರಣೆ ಮಾಡಲು ನಮ್ಮ ತಯಾರಿ ಹೇಗಿರಬೇಕೆಂಬುವುದರ ಬಗ್ಗೆ ಅಭ್ಯಾಸ ಮಾಡುತ್ತೇವೆ.

ವಿಷಯ :

"ಮನವೊಂದು ಮರ್ಕಟದಂತೆ" ಮನವನ್ನು ಮುದುಡಲು ಬಿಡದೆ ಅದಕೆ ಸತತವಾಗಿ ಸಂತಸಕರ ಸಂಗತಿಗಳ ತುಂಬುತಲಿರಬೇಕು. ಹೀಗಾದಾಗ ಮಾತ್ರ ಅದು ಶಾಂತವಾಗಿರಬಲ್ಲದು. ಮನಸ್ಸಿನ ಒತ್ತಡ ಕಡಿಮೆಗೊಳಿಸುವ ಕೌಶಲಗಳ ಕುರಿತು ಈ ಕಾರ್ಯಾಗಾರ ತಿಳಿಸುತ್ತದೆ. ಇಲ್ಲಿ ಸ್ವಯಂ ಅಭಿವ್ಯಕ್ತಿ, ಕಲೆ, ಸೃಜನಶೀಲ ಬರವಣಿಗೆ, ಭಾವನೆಗಳ ನಿಯಂತ್ರಣ ಮುಂತಾದ ಬೌದ್ಧಿಕ ವ್ಯಾಯಾಮಗಳೆಡೆಗೆ ನಾವು ಸಾಗುತ್ತೇವೆ.
 

೩) ಆಧ್ಯಾತ್ಮಿಕ ಆರೋಗ್ಯ ಮತ್ತು ಬೆಖವಣಿಗೆ :

ನಮಗೆ ನಿಲುಕದ ಅದೆಷ್ಟೋ ಪ್ರಶ್ನೆಗಳಿಗೆ ನಾವು ಉತ್ತರ ಬಯಸಿ ಬಂದು ನಿಲ್ಲುವುದು ಆಧ್ಯಾತ್ಮವೆಂಬ ಅರಮನೆಯ ದ್ವಾರ ಬಾಗಿಲಿಗೆ ಆಧ್ಯಾತ್ಮದ ಕೊಂಡಿ ಸದಾ ನಮ್ಮನು ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕ ಹೊಂದಲು ಸಹಕರಿಸುತ್ತದೆ. ನಾವು ನಮ್ಮ ಅಂತರಂಗದೊಂದಿಗೆ ಸಂಪರ್ಕ ಸಾಧಿಸಲು ಜೀವಿತದ ಉದ್ದೇಶವನ್ನು ಅರ್ಥೈಸಿಕೊಳ್ಳಲು ಅದನ್ನು ಗಾಢವಾಗಿಸಲು ವಿವಿಧ ಆಧ್ಯಾತ್ಮಿಕ ಅಭ್ಯಾಸಗಳನ್ನು ಅನ್ವೇಷಿಸುತ್ತೇವೆ.

ವಿಷಯ :

ನಮ್ಮ ಅಂತರಂಗದೊಡನೆ ಸಂಪರ್ಕ ಸಾಧಿಸಲು ಧ್ಯಾನ, ಪ್ರಾರ್ಥನೆ, ಪಠಣ ಮುಂತಾದ ವಿಭಿನ್ನ ಆಧ್ಯಾತ್ಮಿಕ ಅಭ್ಯಾಸಗಳ ಶೋಧನೆ, ಆಲೋಚನೆ-ಅಭ್ಯಾಸ- ಭಾವನೆಗಳ ನಡುವರು ಸೂಕ್ಷ್ಮ ಅರಿಯುವುದು ಅಳವಡಿಸಿಕೊಳ್ಳುವುದನ್ನು ಕಲಿಯುತ್ತೇವೆ.
 

೪) ವೈಯಕ್ತಿಕ ಬೆಳವಣಿಗೆ ಮತ್ತು ಸ್ವಯಂ ಅರಿವು :

ವ್ಯಕ್ತಿಗತ ಬೆಳವಣಿಗೆ ನಮ್ಮ ಜೀವನದಲ್ಲಿ ಸಮಷ್ಟಿ ಸಮೃದ್ಧಿಯೆಡೆಗೆ ನಾವು ಹೊರಳುವಂತೆ ಮಾಡುವುದರೊಂದಿಗೆ ಸ್ವಯಂ ಅರಿವನ್ನು ಮೂಡಿಸುತ್ತದೆ. ನಮ್ಮ ಸಾಮರ್ಥ್ಯ, ಜೀವನದ ಗುರಿ-ಉದ್ದೇಶ, ದೌರ್ಬಲ್ಯಗಳ ಪರಿಚಯಿಸಿ ನಮ್ಮ ಆಳವಾದ ತಿಳುವಳಿಕೆಯನ್ನು ಅಭಿವೃದ್ಧಿ ಪಡಿಸುವ ಮಾರ್ಗಗಳನ್ನು ತೆರೆದಿಡುತ್ತದೆ.

ವಿಷಯ :

ನಮ್ಮ ವ್ಯಕ್ತಿಗತ ಮೌಲ್ಯಗಳು, ಗುರಿ, ಆಕಾಂಕ್ಷೆಗಳನ್ನು ಅನ್ವೇಷಿಸಲು ಆತ್ಮಾವಲೋಕನ, ಧ್ಯಾನ, ವ್ಯಾಯಾಮಗಳು ಎಷ್ಟು ಪರಿಣಾಮಕಾರಿ ಎಂಬುವುದರ ಕುರಿತು ಕಾರ್ಯಾಗಾರ. ಇಲ್ಲಿ ಅನುಕಂಪ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲು ಗುಂಪು ಚಟುವಟಿಕೆ ಮತ್ತು ವ್ಯಾಯಾಮ ಸಹಕಾರಿಯಾಗಿವೆ.
 

೫) ಸಂಬಂಧಗಳು ಮತ್ತು ಸಮುದಾಯ ನಿರ್ಮಾಣ :

ನಂಬಿಕೆ, ಸ್ನೇಹ, ನಿಸ್ಪೃಹತೆಗಳು ಸಾಮಾಜಿಕ ಸಂಬಂಧಗಳನ್ನು ಕಟ-ಗಟ್ಟಿಗೊಳಿಸುವ ಪ್ರಾರಂಭಿಕ ಮೆಟ್ಟಿಲುಗಳು. ಇದು ಈ ದಿನದ ಕಾರ್ಯಾಗಾರದ ಪ್ರಮುಖ ಅಂಶ. ನಾವಿಲ್ಲಿ ಸಾಮಾಜಿಕ ಸಂಬಂಧಗಳನ್ನು ಆಳವಾಗಿಸಲು ಮತ್ತು ಮುಂದುವರಿಸಿಕೊಂಡು ಹೋಗಲು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಮಾರ್ಗಗಳನ್ನು ಶೋಧಿಸುತ್ತೇವೆ.

ವಿಷಯ :

ನಾವಿಲ್ಲಿ ಉತ್ತಮ ಸಮುದಾಯದ ನಿರ್ಮಾಣದಲ್ಲಿ ಸಮಾಜದ ನನ್ನಪುಟ್ಟ ಸಂಬಂಧ, ಕುಟುಂಬ, ಸಂಘ, ಗುಂಪು ಚಟುವಟಿಕೆಗಳು, ಉತ್ತಮ ಸಂವಹನ, ಸಂಘರ್ಷ ಪರಿಹಾರಗಳ ಕುರಿತು ಕಾರ್ಯಾಗಾರ ಕೈಗೊಳ್ಳುತ್ತೇವೆ. ಸಂಬಂಧ ಮತ್ತು ಸಂಪರ್ಕ ಉತ್ತೇಜಿಸಲು ಗುಂಪು ವಿಹಾರ ಚಟುವಟಿಕೆ, ಆರೋಗ್ಯಕರ ಚರ್ಚೆ, ಸಂವಾದ, ಮಾತುಕತೆ ಇತ್ಯಾದಿಗಳನ್ನು ಸಾಧಿಸಲು ಯತ್ನಿಸುತ್ತೇವೆ.

"ಸಮೃದ್ಧಿ ಸಂಪದ" ಆಧ್ಯಾತ್ಮಿಕ ಕಾರ್ಯಕ್ರಮದ ಉದ್ದೇಶಗಳು ಮತ್ತು ವಿಷಯದ ಬಗ್ಗೆ ಈ ವಿವರಣೆಯು ನಿಮಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.

Program donation for all 7days based on the choice of accommodation:

  • Dormitory (separate for Gents, Ladies): Rs. 11000 per person

  • Twin Sharing, Standard rooms (limited) : Rs. 15700 per person

  • Single occupancy, Deluxe rooms (limited): Rs. 22000 per person